`ಮುಗಿಲ್ ಪೇಟೆ`ಡೈರೆಕ್ಟರ್ ಹೊಸ ಸಿನಿಮಾ..ಜೋಡಿಹಕ್ಕಿ ಸೀರಿಯಲ್ ತಾಂಡವ್ ರಾಮ್ ನಾಯಕ
Posted date: 01 Sun, Oct 2023 10:45:41 AM
ಮುಗಿಲ್ ಪೇಟೆ ಸಿನಿಮಾದ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದ  ನಿರ್ದೇಶಕ  ಭರತ್ ಎಸ್ ನಾವುಂದ ಮತ್ತೊಂದು ಹೊಸ ಆಯಾಮದೊಂದಿಗೆ  ಹೆಜ್ಜೆ ಇಡಲು ಸಜ್ಜಾಗಿದ್ದಾರೆ . ಮುಗಿಲ್ ಪೇಟೆ ಚಿತ್ರದ ಮೂಲಕ ಭರವಸೆ ನಿರ್ದೇಶಕರಾಗಿ ಹೊರಹೊಮ್ಮಿರುವ ಅವರೀಗ ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ ಅವರನ್ನು ನಾಯಕನಟರಾಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.

ಅಡಚಣೆಗಾಗಿ ಕ್ಷಮಿಸಿ ಎಂಬ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಭರತ್ ಎಸ್ ನಾವುಂದ ಆ ಬಳಿಕ ಸುಂದರ ಪ್ರೇಮಕಥೆ ಜೊತೆಗೆ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಮುಗಿಲ್ ಪೇಟೆ ಚಿತ್ರವನ್ನು ಪ್ರೇಕ್ಷಕ ಎದುರು ನಿಲ್ಲಿಸಿದರು. ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು . ಭರತ್ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು . ಇದೀಗ ಅವರು ಮೂರನೇ ಸಿನಿಮಾಗೆ ಅಣಿಯಾಗಿದ್ದಾರೆ.

ಜೋಡಿಹಕ್ಕಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ತಾಂಡವ್ ರಾಮ್ ಭರತ್ ಜೊತೆ ಕೈ ಜೋಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಂಗಣ ದೊಂದಿಗೆ ನಿರ್ಮಾಣವಾಗುತ್ತಿರುವ ಈ ಸಿನಿಮಾ. ಎ ಕ್ಯೂಬ್ ಫಿಲ್ಮಂಸ್ ಸಂಸ್ಥೆಯ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಲಿದೆ, ಹಾಗೂ ಭರತ್ ಎಸ್ ನಾವುಂದ ರವರ ಮೂರನೇ ಕನಸು ಇದಾಗಿದೆ. ಪಕ್ಕ ಫ್ಯಾಮಿಲಿ ಕಥಾಹಂದರದ ಸಿನಿಮಾ ಮಾಡಲು ಸಜ್ಜಾಗಿರುವ ಚಿತ್ರತಂಡ , ಶೀಘ್ರದಲ್ಲಿಯೇ ಮತ್ತೊಂದಷ್ಟು ಅಪ್ ಡೇಟ್ಸ್ ಜೊತೆ ಗೆ  ನಿಮ್ಮ ಮುಂದೆ ಹಾಜರಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed